ಕನ್ನಡ ಭಾಷೆಯು ಸೂಕ್ಷ್ಮವಾದ ಗುಣಿತಾಕ್ಷರ ಪ್ರಸ್ತಾರ (ಎಂದರೆ ಕಾಗುಣಿತದ ಬರವಣಿಗೆ ) ಉಳ್ಳದ್ದಾಗಿದೆ . ಅದ್ದರಿಂದ ಈ ಭಾಷೆಯನ್ನು ಬರೆಯುವಾಗ ಎಚ್ಚರಿಕೆ ವಹಿಸಬೇಕಾದ್ದು ಅತ್ಯಗತ್ಯ . ಉದಾಹರಣೆ ನೋಡಿರಿ :- ಊಟ = ಭೋಜನ ಊತ = ಬಾತುಕೊಳ್ಳುವಿಕೆ ದನ = ಹಸು, ಗೋವು, ಆಕಳು, ಆವು ಧನ = ಹಣ, ವಿತ್ತ, ಅರ್ಥ (ಕಾಸು = ಚಲಾವಣೆಯ ನಾಣ್ಯ ) ಅಸ್ತಿತ್ವ = ಇರುವಿಕೆ ಅಸ್ಥಿ = ಮೂಳೆ, ಎಲುಬು ಮಣ = ತೂಕದ ಒಂದು ಪ್ರಮಾಣ ಮನ = ಮನಸ್ಸು ಮಂಡಿ = ಮೊಣಕಾಲು ನಾನಾರ್ಥ: (ನಾಮಪದ) ಸಗಟು ವ್ಯಾಪಾರದ ಅಂಗಡಿ ಮಂದಿ = ಜನ ಸಮೂಹ ನಾನಾರ್ಥ : (ನಾಮಪದ) ಅಗ್ಗ , ಸೋವಿ ಎಡೆ = ಸ್ಥಳ, ಆಸ್ಪದ (ನಾನಾರ್ಥ (ನಾಮಪದ) ಹತ್ತಿರ, ನೈವೇದ್ಯ , ಊಟ. (ಕ್ರಿಯಾಪದ) ಸಿಪ್ಪೆಯನ್ನು ಸುಲಿ) ಎದೆ = ಹೃದಯ, ವಕ್ಷ ಕಪ್ಪ = ಕಾಣಿಕೆ , ಪೊಗದಿ , ಕಡಗ ಕಬ್ಬ = ಕಾವ್ಯ ಚೂಟ = ಚುರುಕು , ಲವಲವಿಕೆ ಚೂಡ = ಶಿಖೆ, ಜುಟ್ಟು , ಶಿಖರ ಕುಂಚ = ನವಿಲುಗರಿಯಿಂದ ಮಾಡಿದ ಕುಂಚಿಕೆ , ಚಾಮರ , ಚಿತ್ರಕಾರ ಬಳಸುವ ಕೂಡಲಿನ ಕುಚ್ಚು ಕುಂಜ = ಲತಾಗೃಹ ಪಲ್ಲವ = ಚಿಗುರು ಪಲ್ಲವಿ = ಹಾಡಿನ ಆರಂಭದಲ್ಲಿದ್ದು ನುಡಿಗೊಂದು ಬಾರಿ ಪುನರಾವರ್ತನೆಗೊಳ್ಳುವ ಭಾಗ